Sunday, September 7, 2008

ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನೋತ್ಸವ & ಕಿರಗೂರಿನ ಗಯ್ಯಾಳಿಗಳು ನಾಟಕ ಪ್ರದರ್ಶನ

ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನೋತ್ಸವವನ್ನು ಏರ್ಪಡಿಸಿ, ತೇಜಸ್ವಿ ರಚಿತ ಕಥೆಯಾಧಾರಿತ ’ಕಿರಗೂರಿನ ಗಯ್ಯಾಳಿಗಳು’ ನಾಟಕವನ್ನು’ರೂಪಾಂತರ’ ತಂಡದವರಿಂದ ಪ್ರದರ್ಶನಗೊಳಿಸಲಾಯಿತು.  
ಇದೇ ಕಾರ್ಯಕ್ರಮದಲ್ಲಿ ಕುವೆಂಪು ವಿರಚಿತ ಭಾವಗೀತೆಗಳ ಗಾಯನವನ್ನೂ ಹಾಗೂ ತೇಜಸ್ವಿಯವರ ಕಥಾ ವಾಚನವನ್ನೂ ಹಮ್ಮಿಕೊಳ್ಳಲಾಗಿತ್ತು.

ದಿನಾಂಕ: ೭ ಸೆಪ್ಟೆಂಬರ್ ೨೦೦೮
ಸ್ಥಳ: ಡಾ|| ರಾಜ್ ಕುಮಾರ್ ಸಭಾಂಗಣ, ರಾಜಾಜಿನಗರ
ಬೆಂಗಳೂರು


Sunday, August 10, 2008

"ಬಂಡ್ವಾಳಿಲ್ಲದ ಬಡಾಯಿ" ನಾಟಕ ಪ್ರದರ್ಶನ

ಅವಿರತವತಿಯಿಂದ ಟಿ.ಪಿ.ಕೈಲಾಸಂ ರಚಿಸಿರುವ, ಬಾಲಾಜಿ ಮನೋಹರ್ ನಿರ್ದೇಶಿಸಿ, ಬೈಂಡಿಂಡ್ ವೈರ್ ತಂಡ ಅಭಿನಯಿಸಿದ್ದ  ’ಬಂಡ್ವಾಳಿಲ್ಲದ ಬಡಾಯಿ’ ಎಂಬ ಹಾಸ್ಯ ನಾಟಕವನ್ನು ಆಯೋಜಿಸಲಾಗಿತ್ತು.  

ದಿನಾಂಕ: ೧೦ ಆಗಸ್ಟ್ ೨೦೦೮
ಸ್ಥಳ: ರಂಗ ಶಂಕರ
ಬೆಂಗಳೂರು

ನಾಟಕವು ಉತ್ತಮವಾಗಿ ಮೂಡಿ ಬಂದು ಪ್ರೇಕ್ಷಕರ ಪ್ರತಿಕ್ರೀಯೆ ಸಂತಸಕರವಾಗಿತ್ತು. ಅವಿರತದ ಈ ಪ್ರಯತ್ನ ಮೇಚ್ಚುಗೆಗೆ ಪಾತ್ರವಾಯಿತು 

Sunday, July 20, 2008

ಉಚಿತ ಆರೋಗ್ಯ ತಪಾಸಣೆ

1.  ಜಾಲಹಳ್ಳಿಯ ಚಿಕಿತ್ಸಾ ಕೇಂದ್ರದಲ್ಲಿ ದಿನಗೂಲಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಮತ್ತು ತಂಬಾಕು ಸೇವನೆಯಿಂದ ಮುಕ್ತಗೊಳಿಸುವ ಉಚಿತ ಚಿಕಿತ್ಸೆ.

೨. ಕುಟುಂಬ ಕಲ್ಯಾಣ ಹಾಗೂ ಗರ್ಭಿಣಿ ಸ್ತ್ರೀಯರ ದೇಹದಲ್ಲಿನ ನಿರೋಧಕ ಶಕ್ತಿಯ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಶಿಬಿರವನ್ನು ಏರ್ಪಡಿಸಿ, ೮೩ ಗರ್ಭಿಣಿ ಸ್ತ್ರೀಯರನ್ನು ತಪಾಸಣೆಗೆ ಒಳಪಡಿಸಲಾಯಿತು.  ಎಲ್ಲಾ ಸ್ತ್ರೀಯರಿಗೂ ಪೌಷ್ಠಿಕಾಂಶದ ಸ್ಥಿತಿ,  ಶಿಶುವಿನ ಬೆಳವಣಿಗೆ, ನಿರೋಧಕ ಶಕ್ತಿಯ ಬಗ್ಗೆ ತಪಾಸಣೆ ನಡೆಸಿ, ತಿಳಿ ಹೇಳಿ, ಅಗತ್ಯವಾದ ಗುಳಿಗೆಗಳನ್ನೂ ಹಾಗೂ ’ವೀಯನಿಂಗ್ ಕಂಟೈನರ್’ ಅನ್ನೂ ನೀಡಲಾಯಿತು. ಜೊತೆಗೆ, ಆರೋಗ್ಯ ಕುರಿತಾದ ಒಂದು ವಿಚಾರ ಸಂಕೀರ್ಣವನ್ನೂ ಏರ್ಪಡಿಸಿ, ’ನಿರೋಧಕ ಶಕ್ತಿಯ ಮಹತ್ವ’, ’ಚಿಕನ್ ಗುನ್ಯ’ , ’ವೀಯನಿಂಗ್ ಅಭ್ಯಾಸಗಳು’ ಹೀಗೆ ಮುಂತಾದ ವಿಷಯಗಳ ಬಗೆ ತಿಳಿ ಹೇಳಲಾಯಿತು.

೩. ಆಂಜನಪ್ಪ ಗಾರ್ಡನ್ ಹಾಗೂ ಬಿನ್ನಿಪೇಟೆಯಲ್ಲಿರುವ ಬೃ.ಬೆಂ.ಮ.ಪಾಲಿಕೆಯ ಮಾಧ್ಯಮಿಕ ಶಾಲೆಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ, ೧೦ ರಿಂದ ೧೫ ವರ್ಷದ ಸುಮಾರು ೭೦ ವಿದ್ಯಾರ್ಥಿಗಳನ್ನು ಪೌಷ್ಠಿಕಾಂಶ ಕೊರತೆಯ ಬಗ್ಗೆ ತಪಾಸಣೆ ನಡೆಸಲಾಯಿತು.  ಸೂಕ್ತವಾದ ಔಷಧಿಗಳನ್ನು ವಿತರಿಸಿ, ಮಕ್ಕಳಲ್ಲಿ ಶುಚಿತ್ವ, ಪರಿಸರದ ಬಗ್ಗೆ ಕಾಳಜಿ ಮುಂತಾದ ವಿಷಯಗಳನ್ನು ತಿಳಿಸಿಕೊಡಲಾಯಿತು.  ವಿದ್ಯಾರ್ಥಿಗಳಿಗೆ ಪುಟ್ಟದಾದ ಬರಹ ಸಾಮಾಗ್ರಿಯನ್ನೂ ವಿತರಿಸಲಾಯಿತು.

ದಿನಾಂಕ: ೨೦ ಜುಲೈ ೨೦೦೮ ಹಾಗೂ ೩೦ ಜುಲೈ ೨೦೦೮